Articles Category

Pradhan Mantri Fasal Bhima Yojana – ರೈತರಿಗೆ ವರದಾನವಾಗಿರುವ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ ಹಾಗೂ ಕಿಸಾನ್ ಸಮ್ಮಾನ್ ಯೋಜನೆಯ ಬಗ್ಗೆ ಮಾಹಿತಿ.

Central Government Schemes For Farmers

Pradhan Mantri Fasal Bhima Yojanaರೈತರಿಗೆ ವರದಾನವಾಗಿರುವ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ ಹಾಗೂ ಕಿಸಾನ್ ಸಮ್ಮಾನ್ ಯೋಜನೆಯ ಬಗ್ಗೆ ಮಾಹಿತಿ.

1.ಕರ್ನಾಟಕ ರಾಜ್ಯ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ :

ನೈಸರ್ಗಿಕ ವಿಕೋಪಗಳಿಂದ ತಮ್ಮ ಬೆಳೆಗೆ ಹಾನಿಯಾದಲ್ಲಿ ರಾಜ್ಯದ ರೈತರು ಆತಂಕ ಪಡುವ ಅಗತ್ಯವಿಲ್ಲ. ಏಕೆಂದರೆ, ಇಂತಹ ಬೆಳೆ ಹಾನಿಗೆ ಸರಿಯಾದ ಸಮಯದಲ್ಲಿ ಪರಿಹಾರ ನೀಡುವ ಸಲುವಾಗಿ ಮಾನ್ಯ ಪ್ರಧಾನ ಮಂತ್ರಿಗಳ ಫಸಲ್ ಭೀಮಾ ಯೋಜನೆ, ಹಾಗೂ ಹವಾಮಾನ ಆಧಾರಿತ ವಿಮಾ ಯೋಜನೆಯನ್ನು ಸರ್ಕಾರ ಜಾರಿಗೊಳಿಸಿದ್ದು ರೈತ ಬಾಂಧವರಿಗೆ ಸೂಕ್ತ ಪರಿಹಾರ ದೊರಕಿಸಿಕೊಡುವಲ್ಲಿ ಕಾರ್ಯನಿರ್ವಹಿಸುತ್ತಿದೆ. ಕೃಷಿಯಲ್ಲಿ ಕೆಲವೊಮ್ಮೆ ಅತಿವೃಷ್ಠಿ, ಅನಾವೃಷ್ಠಿ, ಅಕಾಲಿಕ ಮಳೆ ಮುಂತಾದ ಪ್ರಕೃತಿ ವಿಕೋಪಗಳು ಹಾಗೂ ಅನಿಶ್ಚಿತ  ಸಂದರ್ಭಗಳಿಂದಾಗಿ ರೈತರು ಕಂಗಾಲಾಗುವ ಸಂದರ್ಭ ಎದುರಾಗುತ್ತಿದೆ. ಹಾಗಾಗಿ ಕೃಷಿಯಲ್ಲಿ ನಿಶ್ಚಿತ ಆದಾಯ ತರುವ ಉದ್ದೇಶದಿಂದ ಅಗ್ರಿಕಲ್ಚರ್ ಇನ್ ಶ್ಯೂರೆನ್ಸ್ ಕಂಪನಿ ಇವರ ಸಹಯೋಗದಿಂದ ಹೋಬಳಿ ಮತ್ತು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಈ ಯೋಜನೆಯನ್ನು ಅನುಷ್ಟಾನಗೊಳಿಸಲಾಗುತ್ತದೆ. ಹೋಬಳಿ ಮಟ್ಟದಲ್ಲಿ ರಾಗಿ-ಮಳೆಯಾಶ್ರಿತ ಹಾಗೂ ಜೋಳ- ಮಳೆಯಾಶ್ರಿತ ಮತ್ತು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಭತ್ತ-ನೀರಾವರಿ, ಭತ್ತ- ಮಳೆಯಾಶ್ರಿತ, ಮುಸುಕಿನ ಜೋಳ- ನೀರಾವರಿ, ಮುಸುಕಿನ ಜೋಳ- ಮಳೆಯಾಶ್ರಿತ, ಈ ಬೆಳೆಗಳಿಗೆ ಬೆಳೆ ಸಾಲ ಪಡೆದ ರೈತರು ಇಷ್ಟಪಡದೇ ಇದ್ದಲ್ಲಿ ಬೆಳೆ ನೋಂದಣೆ ಅಂತಿಮ ದಿನಾಂಕಕ್ಕೆ 7 ದಿವಸಗಳ ಮೊದಲು ಲಿಖಿತ ಮುಚ್ಚಳಿಕೆ ನೀಡಿದಲ್ಲಿ ಬೆಳೆ ವಿಮೆ ಯೋಜನೆಯಿಂದ ಕೈಬಿಡಲಾಗುವುದು. ಹಾಗೂ, ಸಾಲ ಪಡೆಯದ ರೈತರು ತಮ್ಮ ಅರ್ಜಿಯೊಂದಿಗೆ ಪಹಣಿ, ಖಾತೆ, ಪಾಸ್ ಪುಸ್ತಕ, ಕಂದಾಯ ರಶೀದಿ, ಮುಂತಾದ ದಾಖಲೆಗಳನ್ನು ನೀಡುವ ಮೂಲಕ ಬೆಳೆ ವಿಮೆಗೆ ನೊಂದಾಯಿಸಬಹುದಾಗಿದೆ.

2.ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ:

ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಡಿಯಲ್ಲಿ, ವಾರ್ಷಿಕವಾಗಿ 6000 ರೂಪಾಯಿಯನ್ನು ಅರ್ಹ ರೈತ ಫಲಾನುಭವಿಗಳ ಖಾತೆಗೆ ಮೂರು ಕಂತುಗಳಲ್ಲಿ  ಪಾವತಿಸಲಾಗುತ್ತಿದೆ. ಜೊತೆಗೆ, 2019 ನೇ ವರ್ಷದಿಂದ ರಾಜ್ಯ ಸರ್ಕಾರವೂ ಸಹ ಹೆಚ್ಚುವರಿಯಾಗಿ ವಾರ್ಷಿಕ 4000 ರೂ. ಗಳಂತೆ  ಎರಡು ಕಂತುಗಳಲ್ಲಿ ನೇರ ನಗದು ವರ್ಗಾವಣೆ ಎಂದರೆ ಡಿ ಬಿ ಟಿ ಮೂಲಕ ಒಟ್ಟು 10,000ರೂ. ಗಳನ್ನು ರೈತರಿಗೆ ಕೃಷಿ ಉತ್ತೇಜನೆ ನೀಡುವ ಉದ್ದೇಶದಿಂದ ನೀಡಲಾಗುತ್ತಿದೆ.

ಇದನ್ನು ಓದಿ… Yashasvini Yojana : ಯಶಸ್ವಿನಿ ಯೋಜನೆ ಮರು ಜಾರಿಗೆ ಸರ್ಕಾರ ಅಸ್ತು. ನವೆಂಬರ್ 1 – 2022 ರಿಂದ ಆರಂಭವಾಗಿದೆ : ರೈತರ ಮೊಗದಲ್ಲಿ ಸಂತಸ.

ಇದೆ ತರಹದ ಕೃಷಿಗೆ ಸಂಬಂಧ ಪಟ್ಟಂತಹ ಮತ್ತಷ್ಟು ಮಾಹಿತಿಗಾಗಿ ನಮ್ಮ ನೇಗಿಲ ಯೋಗಿ ಅಪ್ ಡೌನ್ಲೋಡ್ ಮಾಡಿ.
ಮತ್ತು ಕೃಷಿ ಗೆ ಸಂಬಂಧಿಸಿದಂತಹ ಎಲ್ಲ ಬಗೆಯ ಮಹಿತಿಯನ್ನ ತಕ್ಷಣಕ್ಕೆ ನಿಮ್ಮ ಮೊಬೈಲ್ ನಲ್ಲಿಯೇ ಪಡೆದುಕೊಳ್ಳಿ

Related Posts

Leave a Reply

Your email address will not be published. Required fields are marked *