Articles Category

Pradhan Mantri Kisan Manadhan Yojana 2023 : ಪ್ರಧಾನ ಮಂತ್ರಿ ಕಿಸಾನ್ ಮಾನಧನ್ ಯೋಜನೆ: ರೈತರಿಗಾಗಿ 3 ಸಾವಿರ ರೂ. ಪಿಂಚಣಿ ದೊರೆಯಲಿದೆ:

Pradhan Mantri Kisan Manadhan Yojana : ಪ್ರಧಾನ ಮಂತ್ರಿ ಕಿಸಾನ್ ಮಾನಧನ್ ಯೋಜನೆ: ರೈತರಿಗಾಗಿ 3 ಸಾವಿರ ರೂ. ಪಿಂಚಣಿ ದೊರೆಯಲಿದೆ:

government Schemes- ಕೇಂದ್ರ ಸರ್ಕಾರವು ರೈತರಿಗಾಗಿ ಜಾರಿಗೆ ತಂದಿರುವ ಮಹತ್ವಾಕಾಂಕ್ಷೆಯ ಯೋಜನೆಯೇ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ. ಈ ಯೋಜನೆಯಲ್ಲಿ, ಕೇಂದ್ರ ಸರ್ಕಾರ ರೈತರಿಗಾಗಿ ವಾರ್ಷಿಕ 6 ಸಾವಿರ ರೂಪಾಯಿ ಆರ್ಥಿಕ ನೆರವು ನೀಡುತ್ತದೆ. ಈ ಹಣವನ್ನು, ತಲಾ ಎರಡು ಸಾವಿರ ರೂಪಾಯಿಗಳಂತೆ ಮೂರು ಕಂತುಗಳಲ್ಲಿ ರೈತರ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಲಾಗುತ್ತದೆ. ಈ ಯೋಜನೆಯ ಲಾಭವನ್ನು ಪಡೆದ ರೈತರು, ಪ್ರಧಾನಮಂತ್ರಿ ಮಾನಧನ್ ಯೋಜನೆಯ ಲಾಭವನ್ನು ಕೂಡ ಪಡೆಯಬಹುದು.

ಮೊದಲಿಗೆ, ಪ್ರಧಾನಮಂತ್ರಿ ಮಾನ ಧನ್ ಯೋಜನೆಯ ಬಗ್ಗೆ ಸಂಕ್ಷಿಪ್ತವಾಗಿ ತಿಳಿಯೋಣ. ಸಣ್ಣ ಮತ್ತು ಅಲ್ಪ ಪ್ರಮಾಣದ ವ್ಯವಸಾಯ ಹೊಂದಿರುವ ರೈತರಿಗೆ ಮಾಸಿಕ ಪಿಂಚಣಿ ನೀಡುವ ಉದ್ದೇಶದಿಂದ ಆರಂಭಿಸಲಾದ ಯೋಜನೆಯೇ ಪಿಎಂ ಕಿಸಾನ್ ಮಾನ್‌ ಧನ್‌ ಯೋಜನೆ. ಈ ಯೋಜನೆಯ ಪ್ರಕಾರ, 60 ವರ್ಷಕ್ಕಿಂತ ಹೆಚ್ಚು ವಯಸ್ಸಿನ ಫಲಾನುಭವಿ ರೈತರಿಗೆ ಪ್ರತಿ ತಿಂಗಳು ಪಿಂಚಣಿಯಾಗಿ 3,000 ರೂ. ನಂತೆ, ವಾರ್ಷಿಕ 36 ಸಾವಿರ ರೂ. ಪಡೆಯಬಹುದು. ಇದರ ಲಾಭ ಪಡೆಯಲು, 18ರಿಂದ 40 ವರ್ಷದೊಳಗಿನ ರೈತರು ಯೋಜನೆಗೆ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದು. ಈ ಪಿಂಚಣಿಯನ್ನು ಪಡೆಯಲು, ರೈತರು ತಮ್ಮ ವಯಸ್ಸಿನ ಪ್ರಕಾರ ಪ್ರತಿ ತಿಂಗಳು ಈ ಯೋಜನೆಯಲ್ಲಿ ಹಣವನ್ನು ಠೇವಣಿ ಮಾಡುವುದು ಅಗತ್ಯ.

ಪ್ರಧಾನಮಂತ್ರಿ ಕಿಸಾನ್ ಮಾನ್ ಧನ್‌ ಯೋಜನೆಯ ಲಾಭ ಪಡೆಯಲು, ರೈತರು ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಮೂಲಕ ಪಡೆದ ಹಣದಲ್ಲಿ ಪ್ರೀಮಿಯಂ ಪಾವತಿಸಬೇಕು. ಇದರ ಪ್ರೀಮಿಯಂ ಹಣ 55 ರಿಂದ 200 ರೂ. ರೈತ 60 ವರ್ಷ ದಾಟಿದ ನಂತರ, ಪ್ರೀಮಿಯಂ ಹಣ ಕಡಿತಗೊಳ್ಳುವುದು ನಿಲ್ಲುತ್ತದೆ. ಮತ್ತು ರೈತರು ಪ್ರತಿ ತಿಂಗಳು 3 ಸಾವಿರ ರೂಪಾಯಿ ಪಿಂಚಣಿ ಪಡೆಯಲು ಪ್ರಾರಂಭಿಸುತ್ತಾರೆ.

ಪ್ರಧಾನಮಂತ್ರಿ ಮಾನ ಧನ್ ಯೋಜನೆಯಲ್ಲಿ ನೋಂದಣಿಗಾಗಿ ರೈತರು ಯಾವುದೇ ಪ್ರತ್ಯೇಕ ಫಾರ್ಮ್ ಭರ್ತಿ ಮಾಡುವ ಅಗತ್ಯವಿಲ್ಲ. ಈಗಾಗಲೇ ಚಾಲ್ತಿಯಲ್ಲಿರುವ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಲ್ಲಿ ನೋಂದಾಯಿಸಿದ ರೈತರು ಪಿಎಂ ಕಿಸಾನ್ ಮಾನ್‌ ಧನ್‌ ಯೋಜನೆಗೂ ಕೂಡ ಸುಲಭವಾಗಿ ನೋಂದಾಯಿಸಿಕೊಳ್ಳಬಹುದು.

 ಈ ಯೋಜನೆಯ ನೋಂದಣಿ ಪ್ರಕ್ರಿಯೆ ಹೇಗಿರುತ್ತದೆ ಎಂದು ನೋಡುವುದಾದರೆ, ಈಗಾಗಲೇ ಹೇಳಿದಂತೆ ಪ್ರಧಾನಮಂತ್ರಿ ಕಿಸಾನ್ ಮಾನ್‌ ಧನ ಯೋಜನೆಗೆ ಹೆಸರನ್ನು ಸೇರಿಸಲು, ನೀವು ಮೊದಲು ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿಯಲ್ಲಿ ಹೆಸರು ನೋಂದಾಯಿಸಿಕೊಳ್ಳಬೇಕಾಗುತ್ತದೆ. ಈ ನೋಂದಣಿಯ ನಂತರ ನೀವು ಪಿಎಂ ಕಿಸಾನ್ ಮಾನ್‌ಧನ್‌ ಯೋಜನೆಯ ಫಾರ್ಮ್ ಭರ್ತಿ ಮಾಡಿ ಅಗತ್ಯವಿರುವ ವಿವರಗಳನ್ನು ಹಾಗೂ ದಾಖಲೆಯೊಂದಿಗೆ ಅರ್ಜಿ ಸಲ್ಲಿಸಬೇಕು. ಈ ಫಾರ್ಮ್‌ನ್ನು ನೀವು ಭರ್ತಿ ಮಾಡಿದ ಸ್ವಲ್ಪ ಸಮಯದಲ್ಲೇ, ನಿಮ್ಮ ಕಂತುಗಳು ಮಾನ್‌ಧನ ಪಿಂಚಣಿ ಯೋಜನೆಗೆ ಪ್ರತಿ ತಿಂಗಳು ಕಡಿತಗೊಳ್ಳುವುದಕ್ಕಾಗಿ ಈ ಯೋಜನೆ ಸಕ್ರಿಯವಾಗುತ್ತದೆ..

ಇದನ್ನು ಓದಿ… ಸರ್ವೆ ನಂಬರ್ ಮೂಲಕ ನಿಮಗೆ ಬರುವ ಬೆಳೆ ವಿಮೆ ಎಷ್ಟು ಎಂದು ಹೀಗೆ ಪರಿಶೀಲಿಸಿ.

ಇದೆ ತರಹದ ಕೃಷಿಗೆ ಸಂಬಂಧ ಪಟ್ಟಂತಹ ಮತ್ತಷ್ಟು ಮಾಹಿತಿಗಾಗಿ ನಮ್ಮ ನೇಗಿಲ ಯೋಗಿ ಅಪ್ ಡೌನ್ಲೋಡ್ ಮಾಡಿ.
ಮತ್ತು ಕೃಷಿ ಗೆ ಸಂಬಂಧಿಸಿದಂತಹ ಎಲ್ಲ ಬಗೆಯ ಮಹಿತಿಯನ್ನ ತಕ್ಷಣಕ್ಕೆ ನಿಮ್ಮ ಮೊಬೈಲ್ ನಲ್ಲಿಯೇ ಪಡೆದುಕೊಳ್ಳಿ

Leave a Reply

Your email address will not be published. Required fields are marked *