Articles Category

ಸಹಜ ಕೃಷಿಯಲ್ಲಿ ಕಳೆ ನಿರ್ವಹಣೆ ! Weed management in organic farming

Weed management in organic farming

ಸಹಜ ಕೃಷಿಯಲ್ಲಿ ಕಳೆ ನಿರ್ವಹಣೆ ! Weed management in organic farming

Weed management – ಕೃಷಿಯ ಮೂಲವೇ ಮಣ್ಣು. ಉತ್ತಮ ಗುಣಮಟ್ಟದ ಬೆಳೆಯನ್ನು ಪಡೆಯುವಲ್ಲಿ ಮಣ್ಣು ಮಹತ್ವದ ಪಾತ್ರ ವಹಿಸುತ್ತದೆ. ಹೆಚ್ಚಾಗಿ ಜಮೀನಿನ ಪ್ರತಿ ಬೆಳೆಯಲ್ಲಿಯೂ ಕಳೆಯನ್ನು ಕಾಣಬಹುದು. ಸಾಮಾನ್ಯವಾಗಿ ಬಿತ್ತನೆ ಮಾಡಿ 30ರಿಂದ 35 ದಿನಗಳ ನಂತರ ಕಳೆಯನ್ನು ತೆಗೆಯುವುದಾದರೆ ಶೇಕಡಾ 30ರಿಂದ 40ರಷ್ಟು  ಕಳೆಯನ್ನು ಯಶಸ್ವಿಯಾಗಿ ನಿರ್ವಹಣೆ ಮಾಡಬಹುದು. ಇಷ್ಟೇ ಅಲ್ಲದೇ, ಈ ಕಳೆಗಳು ಬೆಳೆಗೆ ಹಾನಿ ಉಂಟು ಮಾಡುವಂತಹ ಕೀಟಗಳಿಗೆ ಕೂಡ ಆಶ್ರಯ ನೀಡುತ್ತವೆ. ಈ ಕಾರಣದಿಂದ ಬೆಳೆಯು ರೋಗದಿಂದ ಬಳಲುವ ಸಾಧ್ಯತೆಯಿರುತ್ತದೆ. ಸಾಮಾನ್ಯವಾಗಿ ಕಳೆಗಳು ವಾತಾವರಣಕ್ಕೆ ಹೊಂದಿಕೊಂಡು ಬೆಳೆಯುತ್ತಾ  ಹೋಗುವ ಸಾಮರ್ಥ್ಯವನ್ನು ಹೊಂದಿರುವ ಕಾರಣ, ಇದರ ಹರಡುವಿಕೆಯೂ ಕೂಡ ಬಹಳ ತೀವ್ರಗತಿಯಲ್ಲಿ ಹರಡುತ್ತದೆ. ಕಳೆಯು ಮುಖ್ಯ ಬೆಳೆಯ ಬೆಳವಣಿಗೆಯನ್ನೇ ಕುಗ್ಗಿಸಿ ಇಳುವರಿಯನ್ನು ಕಡಿಮೆ ಮಾಡುತ್ತಾ ಹೋಗುತ್ತದೆ. ಕಳೆಗಳು, ಬೆಳೆಗಳ ಬೆಳವಣಿಗೆಗೆ ಬೇಕಾಗುವ ಬೆಳಕು, ತೇವಾಂಶ, ಪೋಷಕಾಂಶಗಳು ಮತ್ತು ಸ್ಥಳವಕಾಶಕ್ಕೂ ಪೈಪೋಟಿ ನಡೆಸುವ ಕಾರಣ ಬೆಳೆಗಳ ಇಳುವರಿ ಮತ್ತು ಗುಣಮಟ್ಟ ಕಡಿಮೆಯಾಗುತ್ತದೆ. ಈ ಕಳೆಗಳು, ರೈತ ಕೈಗೊಂಡ ಕೃಷಿಯ ಮೂಲ ಬೆಳೆಯೊಂದಿಗೆ ಸ್ಪರ್ಧಿಸಿ ಬೆಳೆಗೆ ಒದಗಿಸುವ ನೀರು, ಗಾಳಿ, ಸ್ಥಳಾವಕಾಶಗಳು ಇನ್ನಿತರ ಆಹಾರ ಅಂಶಗಳನ್ನು ಹೀರಿಕೊಳ್ಳುತ್ತವೆ. ಈ ಕಾರಣದಿಂದಾಗಿ ಕಳೆಯು, ಹಿರಿಯ ಮುಖ್ಯ ಬೆಳೆಯ ಇಳುವರಿಯನ್ನು ಮತ್ತು ಬೆಳೆಯ ಗುಣಮಟ್ಟವನ್ನು ಕುಂಠಿತಗೊಳಿಸುತ್ತದೆ. ಹೀಗಾಗಿ ಬೆಳೆಯ ಮಧ್ಯದಲ್ಲಿ ಇರುವ ಕಳೆಯನ್ನು ಸಮರ್ಪಕ ನಿರ್ವಹಣಾ ಕ್ರಮಗಳನ್ನು ಅನುಸರಿಸುವ ಮೂಲಕ ತೊಡೆದು ಹಾಕುವುದು ಅತಿ ಮುಖ್ಯವಾಗಿರುತ್ತದೆ.

ಮೊದಲನೇದಾಗಿ, ಕಳೆಗಳು ಬೆಳೆಗಳಿಗಿಂತ ಪೈಪೋಟಿಯಲ್ಲಿ ಮುಂದಿರುವುದಕ್ಕೆ ಮುಖ್ಯ ಕಾರಣವೇ ಕಳೆಗಳ ಕೆಲವು ವಿಶೇಷ ಗುಣಗಳು. ಅವುಗಳೆಂದರೆ, 

  • ಕೆಲವು ಕಳೆಗಳು ಸಮೃದ್ಧಿಯಾಗಿ ಬೀಜ ಉತ್ಪಾದಿಸುವ ಶಕ್ತಿಯನ್ನು ಹೊಂದಿರುತ್ತವೆ. 
  • ಕೆಲವು ಬಹುವಾರ್ಷಿಕ ಕಳೆಗಳಲ್ಲಿ ಗೆಡ್ಡೆಗಳು, ಬೇರುಗಳು ಮತ್ತು ಕಾಂಡದ ತುಂಡುಗಳು ಕೂಡ ಆಹಾರವನ್ನು ಶೇಖರಿಸಿಟ್ಟುಕೊಳ್ಳುವ ಶಕ್ತಿಯನ್ನು ಹೊಂದಿರುತ್ತವೆ.
  • ಕೆಲವು ಕಳೆಗಳ ಬೀಜಗಳಲ್ಲಿ ಮತ್ತು ಗೆಡ್ಡೆಗಳಲ್ಲಿ ವಿವಿಧ ರೀತಿಯ ಜಡತ್ವ ಇರುವುದರಿಂದ ಹೆಚ್ಚುಕಾಲ ಬದುಕಲು ಸಹಕರಿಸುತ್ತವೆ. 
  • ಕೆಲವು ಕಳೆ ಬೀಜಗಳು ಮಣ್ಣಿನಲ್ಲಿ ಬಹು ಆಳಕ್ಕೆ ಸೇರಿಸಿಕೊಳ್ಳುತ್ತವೆ, ಹಾಗೂ ಈ ಕಾರಣದಿಂದ ಅಧಿಕ ಕಾಲ ಬದುಕಿ ಉಳಿದಿರುತ್ತವೆ.

ಹಾಗಾಗಿ ಕಳೆ ನಿರ್ವಹಣೆ ಮಾಡುವುದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದುಕೊಳ್ಳುವುದು ಅತೀ ಮುಖ್ಯ

Weed management ಸಮಗ್ರ ಕಳೆ ನಿರ್ವಹಣಾ ಪದ್ದತಿ: ಕಳೆಗಳ ಪೈಪೋಟಿಯನ್ನು ಕಡಿಮೆ ಖರ್ಚಿನ ಎರಡು ಅಥವಾ ಎರಡಕ್ಕಿಂತ ಹೆಚ್ಚು ಕಳೆ ನಿರ್ವಹಣಾ ಪದ್ಧತಿಗಳನ್ನು ಒಟ್ಟುಗೂಡಿಸಿ, ಕಳೆ ನಿಯಂತ್ರಣ ಮಾಡುವುದಕ್ಕೆ ಸಮಗ್ರ ಕಳೆ ನಿರ್ವಹಣಾ ಪದ್ಧತಿ ಎಂದು ಕರೆಯಬಹುದು. ಒಂದು ಬೆಳೆ ಅಥವಾ ಯಾವುದೇ ಬೆಳೆ ಪದ್ದತಿಯಲ್ಲಿ ಆರ್ಥಿಕ ಹಾನಿ ಮಟ್ಟಕ್ಕಿಂತ ಇಳುವರಿ ಕಡಿಮೆಯಾಗದಂತೆ ನೋಡಿಕೊಳ್ಳುವ ವಿಧಾನವೇ ಸಮಗ್ರ ಕಳೆ ನಿರ್ವಹಣಾ ಪದ್ಧತಿ. 

Weed management ವಿವಿಧ ಕಳೆ ನಿರ್ವಹಣಾ ಪದ್ದತಿಗಳು: 

  • ಬೇಸಾಯ ಪದ್ದತಿಗಳು
  • ಯಾಂತ್ರಿಕ ಪದ್ಧತಿಗಳು
  • ಕಳೆ ನಾಶಕಗಳ ಬಳಕೆ
  • ಜೈವಿಕ ಪದ್ಧತಿಗಳು

ಮುಖ್ಯವಾಗಿ, ಈ ಸಮಗ್ರ ಕಳೆ ನಿರ್ವಹಣಾ ಪದ್ಧತಿಯು ಪರಿಣಾಮಕಾರಿಯಾದ, ಅವಲಂಬಿಸಬಹುದಾದ, ಅನುಷ್ಠಾನಕ್ಕೆ ತರಲು ಸಾಧ್ಯವಾಗುವಂತಹ ಮತ್ತು ಪರಿಸರಕ್ಕೆ ಧಕ್ಕೆ ಮಾಡದಂತಹ ಸಂಯೋಜಿತವಾದಂತಹ ಪದ್ಧತಿಯಾಗಿರಬೇಕು.  ಇನ್ನು, ಸಾಮಾನ್ಯವಾಗಿ ಕಳೆಯನ್ನು ವಾರ್ಷಿಕ ಹಾಗೂ ಬಹುವಾರ್ಷಿಕ ಕಳೆಗಳೆಂದು ವಿಭಾಗಿಸಲಾಗುತ್ತದೆ.  ವಾರ್ಷಿಕ ಕಳೆಗಳೆಂದರೆ ಅಲಬು, ತುಂಬೆ ಕನ್ನೆ, ನರಿ ಬಾಲದ ಹುಲ್ಲು, ಮುಳ್ಳು ಉತ್ತರಾಣಿ, ಮುಳ್ಳು, ಸಿಂಪಿಗನ ಕಸ ಮುಂತಾದವು. ಬಹುವಾರ್ಷಿಕ ಕಳೆಗಳಿಗೆ ಉದಾಹರಣೆ ಗರಿಕೆ. 

ಕಳೆಗಳನ್ನು ಏಕದಳ ಮತ್ತು ದ್ವಿದಳ ಕಳೆಗಳು ಎಂದು ಸಹ ಕರೆಯಲಾಗುತ್ತದೆ. ಸಾಮಾನ್ಯವಾಗಿ, ದ್ವಿದಳ ಗುಂಪಿಗೆ ಸೇರಿದ ಕಳೆಗಳ ಎಲೆಗಳು ಅಗಲವಾಗಿರುತ್ತವೆ. ಮತ್ತು ಏಕದಳ ಕಳೆಗಳು ಹುಲ್ಲು ಜಾತಿಗೆ ಸೇರಿದವುಗಳಾಗಿವೆ. ಕಳೆಗಳು ಹೆಚ್ಚಾಗಿ ನೀರು, ಮಣ್ಣು, ಬೆಳೆ ಮತ್ತು ವಾತಾವರಣದ ಆಧಾರದ ಮೇಲೆ ಹೊಂದಿಕೊಂಡು ಬೆಳೆಯುತ್ತವೆ. ಸಾಮಾನ್ಯವಾಗಿ, ಬಯಲುಸೀಮೆಯಲ್ಲಿ ಪಾರ್ತೆನಿಯಂ ಕಳೆಯು ದೊಡ್ಡ ಸಮಸ್ಯೆಯಾಗಿ ಕಾಡುತ್ತದೆ. ಇನ್ನು, ಕಪ್ಪು ಮಣ್ಣಿನಲ್ಲಿ ಗರಿಕೆಯು ಹೇರಳವಾಗಿ ಕಾಡುವ ಸಮಸ್ಯೆಯಾಗಿದೆ. ಕೆಂಪು ಮಣ್ಣಿನಲ್ಲಿ ಜೇಕು ಸಹ ವೇಗವಾಗಿ ಬೆಳೆಯುತ್ತದೆ. ಕಳೆಗಳು ಬೆಳೆಯಲ್ಲಿ ಪರಾವಲಂಬಿಯಾಗಿ ಬೆಳೆಯ ಜೊತೆಯಲ್ಲಿ ಬೆಳೆದು ಇಳುವರಿಯನ್ನು ಕುಗ್ಗಿಸುತ್ತದೆ. ಇನ್ನು, ಕೆಲವು ಕಳೆಗಳು ನೀರಿನಲ್ಲಿ ಬೆಳೆಯುತ್ತವೆ. ಈ ಕಳೆಗಳು ಸಾವಿರಾರು ಬೀಜಗಳನ್ನು ಉತ್ಪತ್ತಿ ಮಾಡಿ ಕಡಿಮೆ ಕಾಲಾವಧಿಯಲ್ಲಿ ಚದುರಿಸುವಂತೆ ಮಾಡುವ ಸಾಮರ್ಥ್ಯ ಹೊಂದಿರುತ್ತವೆ. ಬೆಳೆ ಬೀಜಗಳ ಜೊತೆಗೆ  ಹುಟ್ಟಿ ಬೆಳೆಗಳಿಗೆ ಪೈಪೋಟಿಯಾಗಿ ಬೆಳೆಯುತ್ತವೆ. ರೈತರು ಅಧಿಕ ಇಳುವರಿ ಪಡೆಯಬೇಕು ಎಂದು ಹೇರಳವಾಗಿ ಹಾಕುವ ನೀರು ಗೊಬ್ಬರಗಳಂತಹ ಪೋಷಕಾಂಶಗಳನ್ನು ತಾವೇ ಹೀರಿಕೊಂಡು, ಬೆಳೆಗೆ ಸಿಗದಂತೆ ಆಡೆ ತಡೆಯುಂಟು ಮಾಡುತ್ತದೆ. 

ಕೆಲವು ಕಳೆಗಳು ಮಣ್ಣಿನಲ್ಲಿ ವಿಷಕಾರಿ ಅಂಶವನ್ನು ಬೇರಿನ ಮೂಲಕ ಹೊರಸೂಸುವ ಮೂಲಕ ಇತರೆ ಸಸ್ಯಗಳ ಬೆಳವಣಿಗೆಯನ್ನು ಕುಂಠಿತಗೊಳಿಸುತ್ತವೆ. ಕೆಲವು ಕಳೆಗಳು ಬೆಳೆಗಳಿಗೆ, ದನಕರುಗಳಿಗೆ ಹಾಗೂ ಮನುಷ್ಯರಿಗೆ ಅಡಚಣೆಯಾದರೆ. ಮತ್ತೆ ಕೆಲವು ಉಪಯೋಗಕಾರಿಯಾದ ಕಳೆಗಳೂ ಇವೆ. 

  • ಪಾರ್ತೇನಿಯಂ ಮೊಟಕುಗೊಳಿಸುವ ಕ್ಯಾಸಿಯಾ, ಇದನ್ನು ಹಸಿರು ಗೊಬ್ಬರವಾಗಿ ಉಪಯೋಗಿಸಲಾಗುವುದು. ಹಾಗೇ, ಗರಿಕೆಯು ದನಗಳಿಗೆ ಒಳ್ಳೆಯ ಪೌಷ್ಟಿಕ ಆಹಾರವಾಗಿದೆ. ಗರಿಕೆಯನ್ನು ಜಮೀನಿನ ಬದುಗಳಲ್ಲಿ ಬೆಳೆಸಿದರೆ ಬದುಗಳು ಭದ್ರವಾಗಿರುತ್ತವೆ, ಇದಲ್ಲದೆ ಜಮೀನಿನ ಮಣ್ಣು ಕೊಚ್ಚಿ ಹೋಗದಂತೆ ತಡೆಯುತ್ತದೆ. ಇನ್ನು, ಕೆಲವು ಕಳೆಗಳು ಔಷಧೀಯ ಗುಣಗಳನ್ನು ಹೊಂದಿದೆ, ಅನೇಕ ವಿಶೇಷ ಗುಣಗಳುಳ್ಳ ಅನೇಕ ಕಳೆ ಸಸ್ಯಗಳನ್ನು ಕೂಡ ನಮ್ಮಲ್ಲಿ ಕಾಣಬಹುದು. ಪರಿಣಾಮಕಾರಿಯಾದಂತಹ ಕಳೆ ನಿಯಂತ್ರಣವು, ಬೆಳೆ ಇಳುವರಿಯನ್ನು ಶೇಕಡ 50 ಕ್ಕಿಂತಲೂ ಹೆಚ್ಚಿಸುತ್ತದೆ. ಆದ್ದರಿಂದ ಒಬ್ಬ ರೈತನಿಗೆ ಇದರ ಮಾಹಿತಿ ಪಡೆಯುವುದು ಬಹಳ ಉಪಯುಕ್ತವಾಗಿರುತ್ತದೆ. 
  • ಕೈ ಕಳೆ ತೆಗೆಯುವುದು, ಕಬ್ಬಿಣದ ನೇಗಿಲುಗಳಂತಹ ಕೃಷಿ ಉಪಕರಣಗಳನ್ನು ಬಳಸುವುದರಿಂದ ಕಳೆ ಹಾಗೂ ಕಳೆಯ ಬೀಜಗಳನ್ನು ನಾಶಮಾಡಬಹುದು.            
  • ಆಳವಾಗಿ ಉಳುಮೆ ಮಾಡುವುದರಿಂದ ಕಳೆ ಬೆಳೆಯುವ ಪ್ರಮಾಣವನ್ನು ಕುಗ್ಗಿಸಬಹುದು. ಈ ರೀತಿ ಉಳುಮೆ ಮಾಡುವುದರಿಂದ ಬೆಳೆ ಹಾನಿ ಮಾಡುವಂತಹ ಕೀಟಗಳು ವಾತಾವರಣದ ಉಷ್ಣಾಂಶಕ್ಕೆ ನಾಶವಾಗುವ ಸಾಧ್ಯತೆಯಿರುತ್ತದೆ.  
  • ಕಳೆನಾಶಕಗಳನ್ನು ಉಪಯೋಗಿಸುವುದರಿಂದ ಕಳೆಯನ್ನು ಹತೋಟಿಯಲ್ಲಿಡಬಹುದು. ಪ್ರೋಫಾನಿಲ್, ಡೈಯುರಾನ್, ಪ್ಯಾರಾಕ್ವಟ್, ಅಲಕ್ಲೋರ್ ಗಳಂತಹ ಮುಂತಾದ ಕಳೆನಾಶಕಗಳನ್ನ ಕೂಡ ಬಳಸಬಹುದು. 

ಹೀಗೆ ಮುಂತಾದ ರೀತಿಯ ಕ್ರಮಗಳನ್ನು ಅನುಸರಿಸುವುದರಿಂದ ನಮಗೆ ಬೇಡವಾದ ಸಸ್ಯ ಮತ್ತು ಗಿಡಗಳನ್ನು ನಾಶ ಮಾಡಲು ಸಾಧ್ಯವಾಗುತ್ತದೆ. ಕಳೆಯನ್ನು ನಾಶಮಾಡಲು ಅನೇಕ ಕಳೆ ಸಮರ್ಪಕ ನಿರ್ವಹಣಾ ಕ್ರಮಗಳ ಬಗ್ಗೆ ತಿಳಿದುಕೊಳ್ಳುವುದು ಅವಶ್ಯಕ. ಹೆಚ್ಚಿನ ಮಾಹಿತಿ ಪಡೆದುಕೊಂಡು ಅನುಸರಿಸುವುದರಿಂದ ಕಳೆಯನ್ನು ಸಮರ್ಪಕವಾಗಿ ನಿರ್ವಹಣೆ ಮಾಡಬಹುದು.

ಇದನ್ನು ಓದಿ… ಸಹಜ ಕೃಷಿಯಲ್ಲಿ ನೀರಿನ ಪಾತ್ರ  ! Role of water in organic farming

ದೆ ತರಹದ ಕೃಷಿಗೆ ಸಂಬಂಧ ಪಟ್ಟಂತಹ ಮತ್ತಷ್ಟು ಮಾಹಿತಿಗಾಗಿ ನಮ್ಮ ನೇಗಿಲ ಯೋಗಿ ಅಪ್ ಡೌನ್ಲೋಡ್ ಮಾಡಿ.
ಮತ್ತು ಕೃಷಿ ಗೆ ಸಂಬಂಧಿಸಿದಂತಹ ಎಲ್ಲ ಬಗೆಯ ಮಹಿತಿಯನ್ನ ತಕ್ಷಣಕ್ಕೆ ನಿಮ್ಮ ಮೊಬೈಲ್ ನಲ್ಲಿಯೇ ಪಡೆದುಕೊಳ್ಳಿ.

Leave a Reply

Your email address will not be published. Required fields are marked *